Apr 6, 2023 | Mythology, Patra Purana
ಕೈಕೇಯಿಯು ದಶರಥನ ಮೂರನೇ ಮಡದಿ, ರಾಮನ ವನವಾಸಕ್ಕೆ ಕಾರಣಳಾದವಳು ಹಾಗೂ ಭರತನ ತಾಯಿ. ಈಕೆಯ ಪಾತ್ರವು ಒಟ್ಟು ರಾಮಾಯಣದ ಮತ್ತು ರಾಮನ ವ್ಯಕ್ತಿತ್ವ ವಿಕಾಸದಲ್ಲಿ, ಹೇಗೆಲ್ಲಾ ಪ್ರಧಾನ ಭಾಗವನ್ನು ವಹಿಸಿತ್ತು ಎಂಬುದನ್ನು ಗಮನಿಸಬೇಕು. ಕೈಕೇಯಿ ಹುಟ್ಟಿದ್ದು ಕೈಕೇಯ ಎಂಬ ದೇಶದಲ್ಲಿ. ಈಕೆಯ ತಂದೆ ಅಶ್ವಪತಿ. ಒಂದು ಕಾಲದಲ್ಲಿ ದಶರಥನು...
Mar 16, 2023 | Mythology, Patra Purana
ಧೃತರಾಷ್ಟ್ರ, ಮಹಾಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಪಾತ್ರ. ಆದರೆ ತಾನು ಕಾಣಿಸಿಕೊಳ್ಳುತಾನೆಯೇ ಹೊರತು, ಬೇರೆ ಏನನ್ನೂ ಕಾಣಲಾರನು. ಏಕೆಂದರೆ ಈತ ಹುಟ್ಟು ಕುರುಡ. ಈತನ ತಾಯಿಯಾದ ಅಂಬಿಕೆ, ನಿಯೋಗದ ಸಮಯದಲ್ಲಿ ವೇದವ್ಯಾಸರನ್ನು ಕಂಡು, ಭಯಪಟ್ಟು, ಕಣ್ಣು ಮುಚ್ಚಿಕೊಂಡಳು. ಪರಿಣಾಮವಾಗಿ ಧೃತರಾಷ್ಟ್ರ ಕುರುಡನಾಗಿ ಜನಿಸಿದ....
Mar 9, 2023 | Mythology, Patra Purana
ದಶರಥನ ಎರಡನೇ ಮಗ ಭರತ. ಈತನ ತಾಯಿ ಕೈಕೇಯಿ. ಅನೇಕರು ಭಾರತ, ಭರತವರ್ಷ ಹಾಗೂ ಭರತಖಂಡ ಎನ್ನುವಾಗ, ರಾಮಾಯಣದ ಭರತ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು ಗ್ರಹಿಕೆ. ಭರತಖಂಡಕ್ಕೆ ಹೆಸರು ಬರುವ ಭರತ ಹಾಗೂ ರಾಮನ ಸಹೋದರ ಭರತ ಇಬ್ಬರೂ ಭಿನ್ನ ವ್ಯಕ್ತಿಗಳು. ರಾಮಾಯಣದ ಭರತನಿಗೆ ಯೋಗ್ಯತೆಯೇನೂ ಕಡಿಮೆಯಿರಲಿಲ್ಲ. ಈತನು ಕೂಡ ಅಗ್ನಿ...
Mar 2, 2023 | Mythology, Patra Purana
ಪಾಂಡು, ಮಹಾಭಾರತದ ಪ್ರಾರಂಭಿಕ ಹಂತದಲ್ಲಿ ಬರುವ ಪಾತ್ರಗಳಲ್ಲೊಂದು. ಈತ, ಚಂದ್ರವಂಶದ ರಾಜಕುಮಾರ ಹಾಗೂ ಐವರು ಪಾಂಡವರ ತಂದೆ. ಈತನ ಹಿನ್ನಲೆಯಲ್ಲಿ ಸ್ವಾರಸ್ಯವಾದ ಸಂಗತಿಗಳಿವೆ. ಪಾಂಡು ಎಂದರೆ ಬಿಳಿಚು ಅಥವಾ ಬೆಳ್ಳಗಿನ ಬಣ್ಣದವನು. ಅಂದರೆ ಕೂದಲು ಸೇರಿದಂತೆ ಸರ್ವಾಂಗವೂ ಬೆಳ್ಳಗಿತ್ತು. ಈ ರೀತಿಯಾಗಿದ್ದು ಏಕೆಂದರೆ, ಪಾಂಡುವಿನ ತಾಯಿ...
Feb 2, 2023 | Mythology, Patra Purana
ರಾಮಾಯಣದಲ್ಲಿ ಪ್ರಧಾನ ಪಾತ್ರವಹಿಸಿದಾತ ದಶರಥ. ಈತನ ಜೀವನಾವಧಿಯೇ ಒಂದು ವಿಶೇಷತೆ. 60,000 ವರ್ಷ ಒಂದು ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ. ಸೂರ್ಯವಂಶದ ಪ್ರಭಾವಿ ಅರಸ ಅಜ ಮಹಾರಾಜನ ಮಗನಾದ ದಶರಥನಿಗೆ ಬಹುಕಾಲ ಮಕ್ಕಳಿರಲಿಲ್ಲ. ಕೋಸಲದ ಭಾನುಮಂತನ ಮಗಳು ‘ಕೌಸಲ್ಯೆ’, ಮಗಧದ ‘ಸುಮಿತ್ರೆ’ ಮತ್ತು ಕೇಕೈಯಿಯ ‘ಕೈಕೇಯೆ’ ಈತನ ಮೂವರು...