Blogs Check out our latest blogs
ಕ್ರೌರ್ಯದ ಮೂಲ ನೆಲೆ ಯಾವುದು ?: ‘ಉತ್ತರಾ’ ಸಿನಿಮಾದಲ್ಲಿದೆ ಉತ್ತರ
ಗುಪ್ತಾ ಅವರ ಸಿನಿಮಾದಿಂದ, ಸಾಹಿತ್ಯ ಹೆಚ್ಚು ಪ್ರಭಾವಿತವಾಗಿದೆ. ಅವರ ಸಾಹಿತ್ಯದಿಂದ ಸಿನಿಮಾಕ್ಕೊಂದು ಶಕ್ತಿ ಬಂದಿದೆ. ಸಾಮಾಜಿಕ, ರಾಜಕೀಯ ಗ್ರಹಿಕೆಗಳು ಒಂದು ದಾರ್ಶನಿಕ ಸ್ವರೂಪ ತಾಳಲು ಇವರ ಸಾಹಿತ್ಯ ನೀಡಿದ ಕೊಡುಗೆ ಅಪಾರ. ಸಿನಿಮಾಗಳಿಗೆ ಒಂದು ಕಾವ್ಯಾತ್ಮಕ ಬಿಂಬವನ್ನು ಕಟ್ಟಿಕೊಡುವ ಶಕ್ತಿಯೂ ಇವರ ಕವಿ ಮನಸ್ಸಿಗಿದೆ.
ನಾಗರಿಕ ಸಮಾಜದ ದೌರ್ಜನ್ಯಕ್ಕೆ ಪ್ರಕೃತಿಯ ಪ್ರತ್ಯುತ್ತರ: ವುಮನ್ ಇನ್ ದ ಡ್ಯೂನ್ಸ್ ವಿಶ್ಲೇಷಣೆ
ಚಲನಶೀಲತೆ ಎಂಬುದು ಎಲ್ಲಾ ಸಮುದಾಯಗಳ ಜೀವಂತಿಕೆಯ ಲಕ್ಷಣ. ಮಾನವ ಸಮಾಜ ಅಭಿವೃದ್ಧಿಯ ಹೆಸರಿನಲ್ಲಿ ಹೆಜ್ಜೆಯಿಡುವುದು ಒಂದು ಕ್ರಮವಾದರೇ, ಪ್ರಕೃತಿಯು ಬೆಳವಣಿಗೆಯ ಹಾದಿಯಲ್ಲಿ ಸಾಗುವುದು ಇನ್ನೊಂದು ಕ್ರಮ. ಇವೆರಡರಲ್ಲಿ ಯಾವುದು ಸರಿ ಎಂಬ ಜಿಜ್ಞಾಸೆಯೂ ನಮ್ಮಲ್ಲಿ ಬಹಳ ಚಾಲ್ತಿಯಲ್ಲಿದೆ. ‘Woman in the Dunes’ ಈ ವಿಚಾರವನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುತ್ತದೆ.
ಮನುಷ್ಯನ ಕ್ರೌರ್ಯ ಮತ್ತು ಸಮಾಜದ ಕ್ರೌರ್ಯ: ಕೌರಿಸ್ಮಾಕಿ ಸಿನಿಮಾದ ಕಥಾವಸ್ತು
ಕೌರಿಸ್ಮಾಕಿ ಸಿನಿಮಾಗಳಲ್ಲಿ ಎರಡು ಮುಖ್ಯ ಭಾಗವಿದೆ. ಒಂದನ್ನು ಹೆಲ್ಸಿಂಕಿ ಟ್ರಯಾಲಜಿ ಎಂದು ಕರೆದರೆ, ಮತ್ತೊಂದನ್ನು ಫಿನ್ ಲ್ಯಾಂಡ್ ಟ್ರಯಾಲಜಿ ಎಂದು ಕರೆಯುತ್ತಾರೆ. ಈತ ಹೆಚ್ಚಾಗಿ ಫಿನ್ ಲ್ಯಾಂಡ್ ದೇಶದ ಕಾರ್ಮಿಕರ ಬಗ್ಗೆ ಹಾಗೂ ಆರ್ಥಿಕವಾಗಿ ಅಸಹಾಯಕ ಸ್ಥಿತಿಯಲ್ಲಿರುವವರ ಬಗ್ಗೆ ಸಿನಿಮಾ ಮಾಡಲು ಉತ್ಸುಕನಾಗಿರುತ್ತಾನೆ.
ಸಂಗೀತದ ಮೂಲಕ ಮಾನವ ಶಕ್ತಿಯನ್ನು ಕಟ್ಟಿಕೊಟ್ಟ ಸಿನಿಮಾ ‘ದ ನೇಕೆಡ್ ಐಲ್ಯಾಂಡ್’
ಬರಡು ನೆಲದಲ್ಲಿ ಹಸಿರು ಚಿಮ್ಮಿಸಲು ಪ್ರಯತ್ನ ಮಾಡುವ ಗಂಡ-ಹೆಂಡತಿ, ತಮ್ಮಿಬ್ಬರು ಮಕ್ಕಳಲ್ಲಿ ಒಬ್ಬನನ್ನು ನಿರ್ದೇಶಕನನ್ನಾಗಿ ಮಾಡಿ, ಮತ್ತೊಬ್ಬಾತನನ್ನು ಉತ್ತಮ ಸ್ಥಾನಕ್ಕೆ ಏರಿಸುವಲ್ಲಿ ಯಶಸ್ಸಾಗುತ್ತಾರೆ. ತನಗೆ ಸರಿಯೆನಿಸಿದ್ದನ್ನು ಹೇಗಾದರೂ ಸಾಧಿಸಬೇಕು, ಅನುಕೂಲವಿಲ್ಲವೆಂದು ಕೈಚೆಲ್ಲಬಾರದು. ನನ್ನ ಜಗತ್ತನ್ನು ಸುಂದರಗೊಳಿಸಬೇಕು ಎಂಬ ಆಂತರಿಕ ಶಕ್ತಿಯನ್ನು ಒಳಗೊಂಡಿದ್ದ ಕುಟುಂಬದ ಬಗ್ಗೆ ಚಿತ್ರದಲ್ಲಿ ಅಭೂತಪೂರ್ವವಾಗಿ ವಿವರಿಸಲಾಗಿದೆ.
ಜಗತ್ತಿನ ಸಿನಿಮಾದಲ್ಲಿ ನವ ವಾಸ್ತವಿಕತೆ ಅಂಶಗಳು: ಅಬ್ಬಾಸ್ ಕೈರೋಸ್ತಾಮಿ ದೃಷ್ಟಿಕೋನ
ಭಾರತದಲ್ಲಿಯೂ ಸತ್ಯಜಿತ್ ರೇ, ರಿತ್ವಿಕ್ ಘಟಕ್, ಬಿಮಲ್ ರಾಯ್ ಮುಂತಾದವರು ಈ ನವವಾಸ್ತವಿಕತೆಯ ಅಂಶಗಳನ್ನು ತಮ್ಮ ಸಿನಿಮಾದಲ್ಲಿ ಅಳವಡಿಸಿಕೊಂಡರು. ಆದರೇ ಜಗತ್ತಿನಾದ್ಯಂತ ಪ್ರಭಾವ ಬೀರಿದ ಈ ಚಿತ್ರ ಶೈಲಿ ಕ್ರಮೇಣ ತನ್ನ ಹೊಳಪನ್ನು ಕಳೆದುಕೊಳ್ಳಲಾರಂಭಿಸಿತು. ನಂತರ 80ರ ದಶಕದಲ್ಲಿ ಬಂದ ಇರಾನ್ ಸಿನಿಮಾ “Where is My Friend’s House” ಅದಕ್ಕೊಂದು ಹೊಸ ಮುನ್ನುಡಿಯನ್ನು ಬರೆಯಿತು.
ಸಿನಿಮಾದಲ್ಲಿ ಶಾಂತತೆ: ಆಟಮ್ ಆಫ್ಟರ್ನೂನ್ ಚಿತ್ರದಲ್ಲಿ ಕಂಡುಬರುವ ಸಹಜ ಪ್ರವೃತ್ತಿ
ಓಝೂ ಅವರ ಸಿನಿಮಾದಲ್ಲಿ ಕಂಡುಬರುವ ಪ್ರಮುಖ ಅಂಶ ಎಂದರೇ, ಮನುಷ್ಯನ ಕೆಟ್ಟ ಗುಣವನ್ನು ತೋರ್ಪಡಿಸಿದೆ, ಸಹಜವಾಗಿರುವ ಪ್ರವೃತ್ತಿಯನ್ನು ಮಾತ್ರ ದಾಖಲಿಸುತ್ತಾರೆ. ಮತ್ತೊಂದು ಸಿನಿಮಾದಲ್ಲಿ ನಾಟಕೀಯತೆ ಇರುವುದಿಲ್ಲ. ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವ್ಯವಹಾರಗಳಲ್ಲಿಯೇ ಬಹಳಷ್ಟು ಅರ್ಥಗಳನ್ನು ಹುಡುಕಿ ಅದನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತಾರೆ.






