Blogs Check out our latest blogs

ಭೂಮಿಯಲ್ಲಿ ಹುಟ್ಟುವುದೇ ದೇವತೆಗಳಿಗೊಂದು ಶಾಪ: ಶಂತನುವಿನ ಕಥನ

ಭೂಮಿಯಲ್ಲಿ ಹುಟ್ಟುವುದೇ ದೇವತೆಗಳಿಗೊಂದು ಶಾಪ: ಶಂತನುವಿನ ಕಥನ

ಪ್ರಾಚೀನ ಕಾಲದ ಒಂದು ಕಥನದ ಪ್ರಕಾರ, ಒಂದು ದಿನ ಸೂರ್ಯವಂಶದ ಮಹಾಭೀಷ ಎನ್ನುವ ಅರಸ, ಬ್ರಹ್ಮಸಭೆಗೆ ಭೇಟಿ ನೀಡುತ್ತಾನೆ. ನದಿಯ ಸ್ತ್ರೀ ರೂಪವಾದ ಗಂಗೆಯೂ ಆ ಸಭೆಯಲ್ಲಿದ್ದಳು.  ಇವರಿಬ್ಬರೂ ಪರಸ್ಪರ ಮೋಹಕ್ಕೆ ಒಳಗಾಗುತ್ತಾರೆ. ಇದನ್ನು ಕಂಡ ಬ್ರಹ್ಮದೇವ ಕೋಪಗೊಂಡು, “ನೀವಿಬ್ಬರೂ ಭೂಮಿಯಲ್ಲಿ ಜನಿಸಿ” ಎಂದು ಶಾಪಕೊಟ್ಟರು. ಬ್ರಹ್ಮನ ಶಾಪದಿಂದ, ಮಹಾಭೀಷ ಮತ್ತು ಗಂಗೆ ಭೂಮಿಯಲ್ಲಿ ಹುಟ್ಟಿದರು. ಮನುಷ್ಯನಿಗೆ ಭೂಮಿ ಸುಖದ ತಾಣ. ಆದರೆ ದೇವತೆಗಳಿಗೆ ಭೂಮಿಯಲ್ಲಿ ಹುಟ್ಟುವುದೇ ಒಂದು ಶಾಪ.

ಆಫ್ರಿಕಾದ ನೈಜ ಜನಜೀವನ ಮತ್ತು ವಿದೇಶಿಗರ ದೃಷ್ಟಿಕೋನ: ‘ಟಿಂಬಕ್ಟೂ’ ಸಿನಿಮಾ ವಿಶ್ಲೇಷಣೆ

ಆಫ್ರಿಕಾದ ನೈಜ ಜನಜೀವನ ಮತ್ತು ವಿದೇಶಿಗರ ದೃಷ್ಟಿಕೋನ: ‘ಟಿಂಬಕ್ಟೂ’ ಸಿನಿಮಾ ವಿಶ್ಲೇಷಣೆ

ಆಫ್ರಿಕಾ ನಾಗರೀಕತೆಯ ಕುರಿತು ಯೂರೋಪ್ ಮತ್ತು ಪಾಶ್ಚಿಮಾತ್ಯ ದೇಶಗಳ ಆಧಾರಿತವಾಗಿಯೇ ಹೆಚ್ಚಿನ ದಾಖಲೆಗಳಿವೆ. ಆಫ್ರಿಕಾದ ಜನತೆ ಅನಾಗರೀಕರು, ಕ್ರೂರರು ಮತ್ತು ಸಭ್ಯತೆಯಿಲ್ಲದಿರುವ ಎಂದೇ ಬಿಂಬಿಸಲಾಗಿದೆ. ಈ ಸ್ವರೂಪದಲ್ಲೇ ಹಾಲಿವುಡ್ ನಿಂದ ಸಾಲು ಸಾಲಾಗಿ ಸಿನಿಮಾಗಳು ಬರುತ್ತಿದ್ದವು. ಇದಕ್ಕೆ ಪ್ರತಿಯಾಗಿ ಹೊಸ ಸಂಸ್ಕೃತಿಯನ್ನು ತೋರಿಸುವುದಕ್ಕಾಗಿ ಹುಟ್ಟಿಕೊಂಡ ಆಫ್ರಿಕನ್ ಸಿನಿಮಾವೇ ಟಿಂಬಕ್ಟೂ.

ಈ ಲೋಕದಲ್ಲಿ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರಾರು ? ವಾಲ್ಮೀಕಿಗೆ ಸಿಕ್ಕ ಉತ್ತರವೇನು ?

ಈ ಲೋಕದಲ್ಲಿ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರಾರು ? ವಾಲ್ಮೀಕಿಗೆ ಸಿಕ್ಕ ಉತ್ತರವೇನು ?

ರಾಮಾಯಣದ ಕರ್ತೃ ವಾಲ್ಮೀಕಿಯಲ್ಲಿ ಎರಡು ರೀತಿಯ ವ್ಯಕ್ತಿತ್ವವಿದೆ. ಒಂದು ರಾಮಾಯಣ ಕಾವ್ಯವನ್ನು ಬರೆದ ಕವಿಯಾಗಿ, ಮತ್ತೊಂದು ಆ ಕಾವ್ಯದಲ್ಲಿ ತಾನೇ ಒಂದು ಪಾತ್ರವಾಗಿರುವುದು. ಒಬ್ಬ ಕವಿ ಒಂದು ಕಾವ್ಯವನ್ನು ಸೃಷ್ಟಿ ಮಾಡುವುದಲ್ಲದೇ, ಪಾತ್ರವಾಗಿ ಅದರ ಭಾಗವಾಗಿರುವುದು ವಿಶೇಷ. ವಾಲ್ಮೀಕಿ ಮೂಲತಃ ಬೇಡ. ದರೋಡೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಈತನಿಗೆ ರತ್ನಾಕರ, ರುಕ್ಷಾ ಎಂಬ ಹೆಸರುಗಳು ಕೂಡ ಇದ್ದವು. ಕ್ರೂರಿಯಾಗಿದ್ದ ಈತ ವಾಲ್ಮೀಕಿಯಾದದ್ದೇ ಒಂದು ಸ್ವಾರಸ್ಯವಾದ ಕಥೆ.

ಸಾಕ್ಷ್ಯ ಚಿತ್ರಕ್ಕೆ, ಕಥಾ ಚಿತ್ರದ ಲೇಪನ: ದ ಸ್ಟೋರಿ ಆಫ್ ದ ವೀಪಿಂಗ್ ಕ್ಯಾಮಲ್

ಸಾಕ್ಷ್ಯ ಚಿತ್ರಕ್ಕೆ, ಕಥಾ ಚಿತ್ರದ ಲೇಪನ: ದ ಸ್ಟೋರಿ ಆಫ್ ದ ವೀಪಿಂಗ್ ಕ್ಯಾಮಲ್

ದ ಸ್ಟೋರಿ ಆಫ್ ದ ವೀಪಿಂಗ್ ಕ್ಯಾಮಲ್ ಸಿನಿಮಾದಲ್ಲಿ ಘರ್ಷಣೆ ಇರುವುದು ಮನುಷ್ಯ-ಮನುಷ್ಯ ನಡುವೆ ಅಲ್ಲ. ಬದಲಾಗಿ ಪ್ರಾಣಿ-ಪ್ರಾಣಿ ನಡುವೆ ಇದೆ. ಇದು ಹೇಗೆ ಎಂಬುದೇ ಸಿನಿಮಾದ ಸ್ವಾರಸ್ಯ. ಸಿನಿಮಾದ ಕಥೆ ಕಟ್ಟುವ ಕ್ರಮ ಬಹಳ ಅದ್ಭುತವಾಗಿದೆ. ನಿರ್ದೇಶಕಿ ಈ ಸಿನಿಮಾವನ್ನು ದಂತಕಥೆ ರೂಪದಲ್ಲಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಬರುವ ಅನೇಕ ಅಂಶಗಳು ನಮಗೆ ಪುರಾಣದಲ್ಲಿ ಕೇಳಿರುವಂತೆ ಭಾಸವಾಗುತ್ತದೆ. ಅಂದರೆ ಮಂಗೋಲಿಯನ್ ಅವರ ನಂಬಿಕೆ ಜಗತ್ತನ್ನು ನಿರ್ದೇಶಕಿ ದಾಖಲಿಸುತ್ತಾಳೆ. ಈ ಸಂಪ್ರದಾಯವನ್ನು ಪ್ರಶ್ನೆ ಮಾಡುವುದಾಗಲಿ ಅಥವಾ ವ್ಯಾಖ್ಯಾನ ಮಾಡುವುದು ಕೂಡ ಸಾಧ್ಯವಿಲ್ಲ.  

ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಭ್ರಮೆ ಮತ್ತು ವಾಸ್ತವ ನಡುವಿನ ಸತ್ಯ: ‘ಬ್ಲೋ-ಅಪ್’ ಕುರಿತು ಕಾಸರವಳ್ಳಿ ಮಾತು

ಬ್ಲೋ-ಅಪ್ (Blow-up) 1966ರಲ್ಲಿ ಬಿಡುಗಡೆಯಾದ ಬ್ರಿಟಿಷ್ ಸಿನಿಮಾ. ಈ ಚಿತ್ರವನ್ನು ನಿರ್ದೇಶಿಸಿದವರು ಮೈಕಲ್ಯಾಂಜಲೋ ಆಂಟೋನಿಯೋನಿ. ಇಟಾಲಿಯನ್ ಫಿಲ್ಮ್ ಮೇಕರ್  ಆಗಿರುವ ಇವರು ಸಿನಿಮಾ ಜಗತ್ತು ಕಂಡ ಅತ್ಯಂತ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಇವರ ಪ್ರಥಮ ಸಿನಿಮಾವಾದ ಬ್ಲೋ-ಅಪ್ ನಲ್ಲಿ ಬಹಳ ರೋಚಕವಾದ ಕಥಾಹಂದರವಿದೆ.

ಸಿನಿಮಾ ಜಗತ್ತಿನ ಕ್ರೌರ್ಯಗಳು: ‘ದ ವರ್ಜಿನ್ ಸ್ಟ್ರಿಂಗ್ಸ್’ ವಿಶ್ಲೇಷಣೆ

ಸಿನಿಮಾ ಜಗತ್ತಿನ ಕ್ರೌರ್ಯಗಳು: ‘ದ ವರ್ಜಿನ್ ಸ್ಟ್ರಿಂಗ್ಸ್’ ವಿಶ್ಲೇಷಣೆ

ಸಾಮಾನ್ಯವಾಗಿ ಬಹುತೇಕ ಸಿನಿಮಾಗಳಲ್ಲಿ ಕ್ರೌರ್ಯವನ್ನು ರೋಚಕವಾಗಿ, ವೈಭವೀಕರಿಸಿ ತೋರಿಸಲಾಗುತ್ತದೆ. ಆ ಕಾರಣಕ್ಕೆ ಕೆಲ ಗಂಭೀರ ನಿರ್ದೇಶಕರು ಕ್ರೌರ್ಯವನ್ನು, ದೈಹಿಕ ಹಿಂಸೆಯ ಸನ್ನಿವೇಶಗಳನ್ನು ತರುವುದಿಲ್ಲ. ಕೆಲವು ನಿರ್ದೇಶಕರಿಗೆ ಮಾತ್ರ ಕ್ರೌರ್ಯವನ್ನು ತೋರಿಸಿದಷ್ಟು ಜನಪ್ರಿಯತೆ ಸಿಗುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಸಿನಿಮಾವನ್ನು ‘ಕಲೆ’ ಎಂದು ಯೋಚನೆ ಮಾಡುತ್ತಾರೋ ಅವರು, ಕ್ರೌರ್ಯವನ್ನು ವ್ಯಾಪಾರದ ಸರಕು ಎಂದು ನಿರ್ಲಕ್ಷಿಸುತ್ತಾರೆ.