Blogs Check out our latest blogs

ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾದಪ್ಪನ ಬೆಟ್ಟದಲ್ಲಿ ಕುತೂಹಲಕಾರಿ ಪುಟ್ಟಿ

ಮಾದಪ್ಪನ ಬೆಟ್ಟದಲ್ಲಿ ವಾಸವಿರುವ ತೇಜಶ್ರೀ ಎನ್ನುವ ಪುಟ್ಟ ಹುಡುಗಿ, ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಹುಶಃ ಈ ಹುಡುಗಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಹೆಜ್ಜೆಗಳನ್ನು ಇಡಬಹುದು. ಬಸ್ ನಿಂದ ಇಳಿದ ಜನರನ್ನು ಮಾತನಾಡಿಸಿ, ಪೂಜೆ ಸಾಮಾಗ್ರಿಗೆ ಜನರು ಒಪ್ಪಿದರೆ, ತಮ್ಮ ಅಂಗಡಿಗೆ ಕರೆದೊಯ್ಯುತ್ತಾಳೆ. ಇದು ವ್ಯಾಪಾರ ಮಾಡುವವರ ಸಹಜ ಲಕ್ಷಣವಾಗಿದ್ದರೂ, ಈಕೆಯ ಶ್ರಮ ಮತ್ತು ಶ್ರದ್ಧೆಯನ್ನು ಮೆಚ್ಚಲೇಬೇಕು.

ಸ್ತಬ್ಧವಾದ ಡಿಸ್ಕೊ ಎಂಬ ತೂಫಾನ್….

ಸ್ತಬ್ಧವಾದ ಡಿಸ್ಕೊ ಎಂಬ ತೂಫಾನ್….

ಡಿಸ್ಕೊ ಬಗೆಗೆ ಈ ಬಗೆಯ ಕ್ರೇಜ್ ಹುಟ್ಟುಹಾಕಿದ್ದು ಬಪ್ಪಿ ಲಹಿರಿ. ಎಂಬತ್ತರ ದಶಕದ ಆರಂಭದಲ್ಲಿ ಮಿಥುನ್ ಚಕ್ರವರ್ತಿ ಅಭಿನಯದ ‘ಡಿಸ್ಕೊ ಡ್ಯಾನ್ಸರ್’ ಚಿತ್ರಕ್ಕೆ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ ‘ I am a disco dancer’ ಹಾಡು ಮೂಡಿಸಿದ ಸಂಚಲನ ಅಂತಿಂಥದ್ದಲ್ಲ. ಅದು ಮಿಥುನ್ ಚಕ್ರವರ್ತಿಯವರ ಜೀವನಕ್ಕೆ ತಿರುವು ನೀಡಿತು. ಬಪ್ಪಿ ಲಹಿರಿ ಸಂಗೀತದ ಝಲಕು ಸೃಷ್ಟಿಸಿದ ಮೋಡಿ ಕಂಡೇ ಆರ್.ಡಿ ಬರ್ಮನ್ ‘ ಎ ಕಹಾಂಸೆ ಆಗಯೇ ಎ ತೂಫಾನ್..?’ ಎಂದು ಕೇಳಿದ್ದರು.

ಒಟಿಟಿಗಳ ಆದಾಯದ ಮೂಲ ಯಾವುದು ?

ಒಟಿಟಿಗಳ ಆದಾಯದ ಮೂಲ ಯಾವುದು ?

ಭಾರತದಲ್ಲಿ ಕಳೆದ 4 ವರ್ಷಗಳಿಂದ ಒಟಿಟಿ ಕ್ರಾಂತಿ ನಡೆಯುತ್ತಿದೆ. ಮೊಬೈಲ್ ಆಪರೇಟರ್ ಗಳು 4ಜಿ ಆರಂಭಿಸಿದಾಗ ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಮಾತ್ರ ಹೆಚ್ಚಳವಾಗಿದ್ದಲ್ಲದೆ ಒಟಿಟಿ ಬಳಸುವವರ ಸಂಖ್ಯೆ ಕೂಡ ದ್ವಿಗುಣಗೊಂಡಿತು. ಇವುಗಳು ಕೋಟಿಗಟ್ಟಲೇ ವ್ಯಯಮಾಡಿ ಸಿನಿಮಾ ಮತ್ತು ಇತರ ಕಾರ್ಯಕ್ರಮಗಳ ಹಕ್ಕುಗಳನ್ನು ಕೊಂಡುಕೊಳ್ಳುತ್ತದೆ.

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಚಿತ್ರಮಂದಿರದಲ್ಲಿ ಮೂರ್ಛೆ ಹೋದ ಮಹಿಳೆಯರು

ಮುಂಬೈನ ಅಜಂತಾ ಸ್ಟುಡಿಯೋದಲ್ಲಿ ತಯಾರಾದ ಈ 12 ರೀಲುಗಳ (142 ನಿಮಿಷ) ಚಿತ್ರ, ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸೆಲೆಕ್ಟ್ ಸಿನಿಮಾ ಹಾಲ್ ನಲ್ಲಿ ಪ್ರದರ್ಶನ ಕಂಡಿತ್ತು. ಗಮನಾರ್ಹ ಸಂಗತಿಯೆಂದರೆ ಭಕ್ತ ಧ್ರುವ ಚಿತ್ರವನ್ನು ವೀಕ್ಷಿಸಿದ ಕೆಲ ಪ್ರೇಕ್ಷಕರು ಸಿನಿಮಾ ಮಂದಿರದಿಂದಲೇ ಓಡಿಹೋಗಿದ್ದರು. ಕೆಲವು ಮಹಿಳೆಯರಂತೂ ಮೂರ್ಛೆಹೋಗಿದ್ದರು.