ಗದಗ: ಸೋಶಿಯಲ್ ಮೀಡಿಯಾ ನಿರ್ವಹಣೆ ಕುರಿತು ಚಿತ್ರಯಾನ ತಂಡದಿಂದ ಎರಡು ದಿನಗಳ ಕಾರ್ಯಾಗಾರವನ್ನು ಗದಗ ಜಿಲ್ಲಾ ಪಂಚಾಯಿತಿಯಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾಪಂಚಾಯಿತಿ ಕೆಲಸ – ಕಾರ್ಯಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಜನರಿಗೆ ಸಮರ್ಪಕವಾಗಿ ತಲುಪಿಸುವುದು ಹಾಗೂ ಇತರೆ ತಂತ್ರಜ್ಞಾನ ಉಪಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ಒದಗಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಐಇಸಿ ತಂಡದವರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗದಗ ಜಿ.ಪಂ ಪ್ರತಿನಿಧಿಗಳು ಹಾಗೂ ಇತರರು ಭಾಗಿಯಾಗಿದ್ದರು. ಕಾರ್ಯಗಾರ ನಡೆಸಲು ಹಾಗೂ ಸೋಶಿಯಲ್ ಮೀಡಿಯಾ ನಿರ್ವಹಣೆ ಕುರಿತು ಮಾಹಿತಿ ನೀಡಲು ಅನುವು ಮಾಡಿಕೊಟ್ಟ ಗದಗ ಜಿ.ಪಂ ಸಿಇಓ ಭರತ್ ಹಾಗೂ ಜಿ.ಪಂ ಅಧಿಕಾರಿ ವರ್ಗಗಳಿಗೆ ಚಿತ್ರಯಾನ ತಂಡ ಕೃತಜ್ಞತೆ ಸಲ್ಲಿಸಿತು.



0 Comments