ಒಟಿಟಿಗಳ ಆದಾಯದ ಮೂಲ ಯಾವುದು ?

ಕಳೆದ ಕೆಲವು ವರ್ಷಗಳಿಂದ ಒಟಿಟಿ ವೆಬ್ ಸ್ಟ್ರೀಮಿಂಗ್ ಪ್ಲಾಟ್‌ ಫಾರ್ಮ್ ಗಳು ಜಗತ್ತಿನಾದ್ಯಂತ ಅತೀ ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಒಟಿಟಿ ಎನ್ನುವುದು ಓವರ್ ದ ಟಾಪ್ ಮೀಡಿಯಾ ಸರ್ವಿಸ್.  ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಪ್ರೈಮ್ ವಿಡಿಯೋ, ವೂಟ್, ಜೀ ಫೈವ್  ಮುಂತಾದವುಗಳನ್ನು ಒಟಿಟಿಗಳೆಂದು ಕರೆಯಲಾಗುತ್ತದೆ. ಭಾರತದಲ್ಲಿ ಪ್ರಸ್ತುತ ಸುಮಾರು 40ಕ್ಕಿಂತ ಹೆಚ್ಚು ಓಟಿಟಿಗಳಿದ್ದು, ಮುಂದಿನ 10 ವರ್ಷಗಳಲ್ಲಿ ಒಟಿಟಿ ಮಾರುಕಟ್ಟೆ ಮೌಲ್ಯ 13 ರಿಂದ 15 ಬಿಲಿಯನ್ ಡಾಲರ್  ಏರಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ಕೆಪಿಎಂಜಿ ವರದಿಯ ಪ್ರಕಾರ, ಭಾರತೀಯ ಚಂದಾದಾರರು ದಿನವೊಂದಕ್ಕೆ ವಿವಿಧ ಒಟಿಟಿ ಪ್ಲಾಟ್‌ ಫಾರ್ಮ್‌ಗಳಲ್ಲಿ ಸರಾಸರಿ 20–50 ನಿಮಿಷಗಳನ್ನು ಕಳೆಯುತ್ತಾರೆ.  ಭಾರತದ ಮೊದಲ ಒಟಿಟಿ BIGflix. ಇದನ್ನು ರಿಲಾಯನ್ಸ್ ಎಂಟರ್ ಟೈನ್ ಮೆಂಟ್ 2008ರಲ್ಲಿ ಆರಂಭಿಸಿತ್ತು. 2010ರಲ್ಲಿ ಭಾರತದ ಮೊದಲ ಒಟಿಟಿ ಮೊಬೈಲ್ ಆ್ಯಪ್ NexGtv ಆರಂಭವಾಗಿತ್ತು. 2013ರ ಆಸುಪಾಸಿನಲ್ಲಿ  Ditto Tv (zee) ಮತ್ತು ಸೋನಿ ಲಿವ್ ಎರಡನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದಾಗ ಒಟಿಟಿ ಸೇವೆ ಭಾರತದಲ್ಲಿ ಗಮನಾರ್ಹ ವೇಗವನ್ನು ಪಡೆದುಕೊಂಡಿತು. Ditto Tvಯು, ಸ್ಟಾರ್, ಸೋನಿ, ವಯಾಕಾಮ್, ಜೀ, ಸೇರಿದಂತೆ ಎಲ್ಲಾ ಮಾಧ್ಯಮ ಚಾನೆಲ್‌ ಗಳನ್ನು  ಒಟ್ಟುಗೂಡಿಸುವ ವೇದಿಕೆಯಾಗಿತ್ತು.

ಭಾರತದಲ್ಲಿ ಕಳೆದ 4 ವರ್ಷಗಳಿಂದ ಒಟಿಟಿ ಕ್ರಾಂತಿ ನಡೆಯುತ್ತಿದೆ. ಮೊಬೈಲ್ ಆಪರೇಟರ್ ಗಳು 4ಜಿ ಆರಂಭಿಸಿದಾಗ ಭಾರತದಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಮಾತ್ರ ಹೆಚ್ಚಳವಾಗಿದ್ದಲ್ಲದೆ ಒಟಿಟಿ ಬಳಸುವವರ ಸಂಖ್ಯೆ ಕೂಡ ದ್ವಿಗುಣಗೊಂಡಿತು. ಇವುಗಳು ಕೋಟಿಗಟ್ಟಲೇ ವ್ಯಯಮಾಡಿ ಸಿನಿಮಾ ಮತ್ತು ಇತರ ಕಾರ್ಯಕ್ರಮಗಳ ಹಕ್ಕುಗಳನ್ನು ಕೊಂಡುಕೊಳ್ಳುತ್ತದೆ.  ಜೊತೆಗೆ ಇತರ ಪ್ರೊಡಕ್ಷನ್  ಹೌಸ್ ಗಳ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತವೆ. ಬಳಕೆದಾರರ ಚಂದಾದಾರಿಕೆ ಹಣದ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ಆದಾಯವಾಗಿ ಒಟಿಟಿಗಳು ಗಳಿಸುತ್ತಿದೆ.

ನಾಲ್ಕು ಮಾದರಿಯಲ್ಲಿ ಒಟಿಟಿಗಳಿಗೆ ಆದಾಯ.

  1. SVOD – (Subscription Video on Demand): ಇಲ್ಲಿ ಒಟಿಟಿ ವೇದಿಕೆಗಳು ಬಳಕೆದಾರರ ಚಂದಾದಾರಿಕೆ ಹಣದ ಮೂಲಕ ಆದಾಯ ಗಳಿಸುತ್ತದೆ. ಇದು ನಿರ್ದಿಷ್ಟ ಸಿನಿಮಾಗಳು, ವೆಬ್ ಸೀರೀಸ್ , ಮುಂತಾದವುಗಳಿಗಾಗಿ ಬಳಕೆದಾರರು ಪಾವತಿಸುವ ಮಾಸಿಕ, ವಾರ್ಷಿಕ ಹಣ. ವಿವಿಧ ಒಟಿಟಿಗಳು ಮಾರುಕಟ್ಟೆಯ ಮೌಲ್ಯಕ್ಕೆ ತಕ್ಕಂತೆ ಚಂದಾದಾರಿಕೆಯ ಹಣವನ್ನು ನಿಗದಿಪಡಿಸಿವೆ.
  2. AVOD – (Advertising Video on Demand): ಇಂದು ಒಟಿಟಿಗಳಲ್ಲಿ ಜಾಹೀರಾತು ನಿರಂತರವಾಗಿ ಮತ್ತು ಅತೀ ಹೆಚ್ಚು ಪ್ರಮಾಣದಲ್ಲಿ ಪ್ರಸಾರವಾಗುತ್ತಿದೆ. ಬಳಕೆದಾರರಿಗೆ ಜಾಹೀರಾತು ಇರಿಸುಮುರುಸಾದರೆ ಪ್ರತ್ಯೇಕವಾಗಿ ಪಾವತಿಸಿ ಜಾಹೀರಾತು ರಹಿತ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶವೂ ಇದೆ.  ಇವು ಕೂಡ ಒಟಿಟಿಗಳಿಗೆ ಆದಾಯದ ಮೂಲವಾಗಿ ಪರಿಣಮಿಸಿದೆ.
  3. Hybrid – (combination of both SVOD and AVOD): ಈ ಮಾದರಿಯಲ್ಲಿ ಚಂದಾದಾರಿಕೆ ಹಾಗೂ ಜಾಹೀರಾತುಗಳನ್ನು ಸಮ್ಮಿಳಿತಗೊಳಿಸಲಾಗುತ್ತದೆ. ಇಲ್ಲಿ ಒಟಿಟಿ ಗಳು ಉಚಿತ ಮತ್ತು ಚಂದಾದಾರಿಕೆಯ ಕಾರ್ಯಕ್ರಮಗಳನ್ನೆರಡೂ ಪ್ರಸಾರ ಮಾಡಿ ಹಣ ಗಳಿಸುತ್ತವೆ.
  4. TVOD- (Transaction Video on demand):  ಚಂದಾದಾರರ ಕೋರಿಕೆಗೆ ಅನುಗುಣವಾಗಿ ಸ್ಟ್ರೀಮಿಂಗ್  ಆಯ್ಕೆಗಳಿರುತ್ತದೆ. ಜೊತೆಗೆ ನೇರಪ್ರಸಾರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ಮೂಲಕವೂ  ಆದಾಯ ಗಳಿಸುತ್ತದೆ. ಸ್ಕೈ ಬಾಕ್ಸ್ ಆಫೀಸ್, ಆಪಲ್ ಐಟ್ಯೂನ್ಸ್, ಅಮೆಜಾನ್ ವಿಡಿಯೋ ಸ್ಟೋರ್ ಮೊದಲಾದವು ಇದೇ ಮಾದರಿಯಲ್ಲಿ ಲಾಭ ಗಳಿಸುತ್ತವೆ.

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more