Blogs Check out our latest blogs

Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

ಕಲೆ ಮತ್ತು ಕಲಾವಿದರ ನಡುವಿನ ಸಂಬಂಧ ಹಳಿ ತಪ್ಪುತ್ತಿದೆಯೇ ? ‘ಡೇ ಫಾರ್ ನೈಟ್’ ವಿಶ್ಲೇಷಣೆ

ಕಲೆ ಮತ್ತು ಕಲಾವಿದರ ನಡುವಿನ ಸಂಬಂಧ ಹಳಿ ತಪ್ಪುತ್ತಿದೆಯೇ ? ‘ಡೇ ಫಾರ್ ನೈಟ್’ ವಿಶ್ಲೇಷಣೆ

‘ಡೇ ಫಾರ್ ನೈಟ್’ ಸಿನಿಮಾ ವೀಕ್ಷಿಸಿದ ನಿರ್ದೇಶಕ ಜಾನ್ ಲುಕ್ ಗೊದಾರ್ದ್, “ಇದೊಂದು ಕೆಟ್ಟ ಸಿನಿಮಾ. ಇದನ್ನು ಏತಕ್ಕಾಗಿ ನಿರ್ದೇಶನ ಮಾಡಿದೆ? ನಾನು ಮಾಡುವ ಸಿನಿಮಾದ ವಿರುದ್ಧವಾಗಿದೆ ಇದು” ಎಂದು ಫ್ರಾಂಕೋಯಿಸ್ ಥ್ರೂಫೋಗೆ ಸಿಟ್ಟಾಗಿ ಪ್ರತಿಕ್ರಿಯಿಸುತ್ತಾನೆ. ಆ ವೇಳೆ ಥ್ರೂಫೋ ಯಾವುದೇ ಮಾತನ್ನು ಹೇಳದೆ ಮೌನವಾಗುತ್ತಾನೆ. ಫ್ರಾಂಕೋಯಿಸ್ ಥ್ರೂಫೋ ನಿಧನರಾದಾಗ ಗೊದಾರ್ದ್, “ನಾನು ನೀಡಿದ ಹೇಳಿಕೆ ನಿಜಕ್ಕೂ ತಪ್ಪು. ಥ್ರೂಫೋ ಮಾಡಿದ್ದೇ ಸರಿ” ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ.

ಯುಗವನ್ನು ಪ್ರಭಾವಿಸಿದ ವೇದವ್ಯಾಸ

ಯುಗವನ್ನು ಪ್ರಭಾವಿಸಿದ ವೇದವ್ಯಾಸ

ವೇದವ್ಯಾಸರು ವಾಲ್ಮೀಕಿಯಂತೆ ಮಹಾಕಾವ್ಯ ಬರೆಯುವುದರ ಜೊತೆಜೊತೆಗೆ, ತಾನು ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ವ್ಯಾಸ ಎಂದರೆ ವಿಭಾಗ ಎಂದರ್ಥ. ವೇದಗಳನ್ನು ವಿಭಾಗ ಮಾಡಿ ಅಧ್ಯಯನ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರಿಂದ ವೇದವ್ಯಾಸ ಅಂತಲೂ ಕರೆಯುತ್ತಾರೆ. ಈ ವ್ಯಾಸ ಎನ್ನುವುದು ಒಬ್ಬ ವ್ಯಕ್ತಿಯ ಹೆಸರಲ್ಲ. ಅದೊಂದು ಇಂದ್ರ ಪದವಿಯ ಮಾದರಿ. ಅಂದರೆ ಇಂದ್ರ ಪದವಿ ಶಾಶ್ವತ. ಆದರೆ ವ್ಯಕ್ತಿ ಬದಲಾಗುತ್ತಿರುತ್ತಾರೆ. ಹೀಗಾಗಿ ಈ ವ್ಯಾಸತ್ವ ಎನ್ನವುದು ಮಹಾಯುಗಕ್ಕೆ ಬದಲಾಗುವ ಒಂದು ಪದವಿ.

ಹಸಿ ಹಸಿ ವಾಸ್ತವ ಸಂಗತಿಗಳೇ ಸಿನಿಮಾಗಳ ಶಕ್ತಿ: ‘ಇನ್ ದಿಸ್ ವರ್ಲ್ಡ್’ ವಿಶ್ಲೇಷಣೆ

ಹಸಿ ಹಸಿ ವಾಸ್ತವ ಸಂಗತಿಗಳೇ ಸಿನಿಮಾಗಳ ಶಕ್ತಿ: ‘ಇನ್ ದಿಸ್ ವರ್ಲ್ಡ್’ ವಿಶ್ಲೇಷಣೆ

‘ಇನ್ ದಿಸ್ ವರ್ಲ್ಡ್’, 2002ರಲ್ಲಿ ಬಿಡುಗಡೆಯಾದ ಸಿನಿಮಾ. ಬ್ರಿಟಿಷ್ ಫಿಲ್ಮ್ ಮೇಕರ್ ಮೈಕೆಲ್ ವಿಂಟರ್ಬಾಟಮ್ ಈ ಚಿತ್ರದ ನಿರ್ದೇಶಕ. ಈತ ಸಾಂಪ್ರದಾಯಿಕ (Conventional) ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದರೂ, ಸಿನಿಮಾ ಭಾಷೆಗೆ ಹೊಸ ಹುರುಪನ್ನು ಕೊಡುತ್ತಿದ್ದನು. ಸಿನಿಮಾವನ್ನು ವೀಕ್ಷಿಸುವಾಗ, ಕಾಲದಿಂದ ಕಾಲಕ್ಕೆ ಕಟ್ಟುವ ಕ್ರಮ, ತಾತ್ವಿಕ ಚಿಂತನೆ ಮತ್ತು ಸಂವಿಧಾನ ಬದಲಾಗುತ್ತಿರುವುದನ್ನು ಸದಾ ಗಮನಿಸುತ್ತಿರಬೇಕು. ಏಕೆಂದರೆ ಸಿನಿಮಾ ಭಾಷೆಯಲ್ಲಿ ಒಳ ಸಂವಾದಗಳು ನಡೆಯುತ್ತಿರುತ್ತದೆ. ಈ ಸಂವಾದಕ್ಕೆ ಬಹಳ ಜನರು ಪ್ರತಿಕ್ರಿಯಿಸುತ್ತಾರೆ. ಈ ತರಹದ ಪ್ರತಿಕ್ರಿಯೆ ಮೂಲಕ ಮೂಡಿಬಂದ ಚಿತ್ರವೇ ‘ಇನ್ ದಿಸ್ ವರ್ಲ್ಡ್’.

ಅಧಿತಿ ದೇವಿ-ದಶರಥನ ಪತ್ನಿ-ರಾಮನ ತಾಯಿ: ಕೌಸಲ್ಯೆಯೆಂಬ ಸುಗರ್ಭ

ಅಧಿತಿ ದೇವಿ-ದಶರಥನ ಪತ್ನಿ-ರಾಮನ ತಾಯಿ: ಕೌಸಲ್ಯೆಯೆಂಬ ಸುಗರ್ಭ

ವಿಶೇಷವಾದ ಮತ್ತು ಯೋಗ್ಯವಂತನಾದ ರಾಮನ ವ್ಯಕ್ತಿತ್ವವನ್ನು ನಮಗೆ ಕೊಟ್ಟ ಕೌಸಲ್ಯೆ ಗರ್ಭವು ನಿಜಕ್ಕೂ ಸುಗರ್ಭವೇ ಹೌದು ಹಾಗೂ ಕೌಸಲ್ಯವೇ ಹೌದು. ಕೋಸಲವೆಂಬ ನಾಡು ಬೇರೆಯಲ್ಲ, ಕೌಸಲ್ಯೆ ಬೇರೆಯಲ್ಲ. ಆ ಕಾರಣಕ್ಕೆ ಒಂದು ನಾಡು ಪಡೆಯಬಹುದಾದ ಒಬ್ಬ ಪುಣ್ಯ ಪುರುಷನನ್ನು ಮಗುವಾಗಿ ಪಡೆಯುವುದಕ್ಕೆ ಕೌಸಲ್ಯೆಗೆ ಸಾಧ್ಯವಾಯಿತು. ಹೀಗೆ ಕೌಸಲ್ಯೆ ಕೇವಲ ರಾಮನ ತಾಯಿಯಾಗದೇ, ದಶರಥನ ಪತ್ನಿ ಮಾತ್ರವಲ್ಲದೇ, ಪೂರ್ವದ ಅಧಿತಿ ದೇವಿಯಾಗಿ ಕೂಡ ಕಾಣಿಸಿಕೊಂಡವಳು.

ಬದುಕಿನ ಸುಖ-ದುಃಖದ ಹುಡುಕಾಟ: ‘ಬಾಯ್’ ಸಿನಿಮಾದ ಒಳಹು

ಬದುಕಿನ ಸುಖ-ದುಃಖದ ಹುಡುಕಾಟ: ‘ಬಾಯ್’ ಸಿನಿಮಾದ ಒಳಹು

ಜಗತ್ತು ಬದಲಾದಂತೆ, ನೈತಿಕತೆ ಮತ್ತು ಮೌಲ್ಯಯುತ ವ್ಯವಸ್ಥೆ ಕೂಡ ಬದಲಾಗುತ್ತಿರುತ್ತದೆ. ಹೀಗೆ 60-70ರ ದಶಕದಲ್ಲಿ ಬದಲಾದ ವ್ಯವಸ್ಥೆ,  ಓಶಿಮಾನನ್ನು ಬಹಳ ಗೊಂದಲಕ್ಕೀಡುಮಾಡಿದ್ದವು. ಇದನ್ನೆಲ್ಲಾ ಸೂಕ್ಷ್ಮವಾಗಿ ಗ್ರಹಿಸುತ್ತಾ ಅಸಂಗತ ಶೈಲಿಯಲ್ಲಿ ಸಿನಿಮಾದ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ. ಲಾಂಗ್ ಶಾಟ್ ಛಾಯಾಗ್ರಾಹಣ, ಶಬ್ದ ಹಾಗೂ ಸಂಕಲನದಲ್ಲಿ ವಿನೂತನ ಪ್ರಯೋಗ ಚಿತ್ರದ ವಿಶೇಷತೆ. ದೃಶ್ಯಗಳನ್ನು ಎಲ್ಲಿಯೂ ನಾಟಕೀಯವಾಗಿ ತೋರಿಸದೆ, ವಾಸ್ತವ ವಿಷಯಗಳನ್ನೇ ಇಟ್ಟುಕೊಂಡು ನಿರ್ದೇಶಿಸಲಾಗಿದೆ.