Blogs Check out our latest blogs

ಚೋಮನ ದುಡಿ ಅತ್ಯಂತ ಪರಿಪೂರ್ಣ ಚಿತ್ರ: ಗಿರೀಶ್ ಕಾಸರವಳ್ಳಿ

ಚೋಮನ ದುಡಿ ಅತ್ಯಂತ ಪರಿಪೂರ್ಣ ಚಿತ್ರ: ಗಿರೀಶ್ ಕಾಸರವಳ್ಳಿ

ಚೋಮನದುಡಿ ಕಾದಂಬರಿಯಲ್ಲೇ ಅನೇಕ ಅಸಮಾನ್ಯ ಸಂಗತಿಗಳಿವೆ. ದಲಿತ, ದಲಿತರ ಶೋಷಣೆಯನ್ನು ಕೇವಲ ಜಾತಿಯ ನೆಲೆಯಲ್ಲಿ ಮಾತ್ರ ನೋಡದೆ. ಅದಕ್ಕೊಂದು ವಿಸ್ತಾರವಾದ ಹಿನ್ನೆಲೆಯನ್ನು ಕೊಡಲಾಗಿದೆ. ಕಾದಂಬರಿಯಲ್ಲಿ ಚೋಮನಿಗೆ ಅನ್ಯಾಯವಾಗುತ್ತಿರುತ್ತದೆ. ಹುಟ್ಟಿನಿಂದ ದಲಿತ ಎನ್ನುವ ಕಾರಣದಿಂದ ಅವನಿಗೆ ಜಮೀನನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅದು ಕನಸಾಗಿಯೇ ಉಳಿಯುವುದು ಇಲ್ಲಿನ ದುರಂತ.

ಬರ ಕೇವಲ ನೈಸರ್ಗಿಕವಾದುದ್ದಲ್ಲ: ಅಕಾಲೇರ್ ಸಂಧಾನೆ

ಬರ ಕೇವಲ ನೈಸರ್ಗಿಕವಾದುದ್ದಲ್ಲ: ಅಕಾಲೇರ್ ಸಂಧಾನೆ

ಬರ ಎನ್ನುವುದು, ನಿರಂತರವಾಗಿ ಭಾರತದಲ್ಲಿ ಬರುತ್ತಾ ಇದೆ. ಎಲ್ಲದ್ದಕ್ಕೂ ಚರ್ಚಿಲ್ ಕಾರಣವಾಗಿರುವುದಿಲ್ಲ. ನಮ್ಮ ಇಲ್ಲಿನ ರಾಜಕೀಯ ನೇತಾರರ ದೂರದೃಷ್ಟಿ ಇಲ್ಲದೆ ಇರುವುದು ಕೂಡ ಕಾರಣಾವಾಗಿರುತ್ತದೆ.

ಕಾಯಿಲೆ ಬರುವುದು ಎಲ್ಲಿಂದ? ಜಪಾನೀಸ್ ಸಿನೆಮಾ ‘ರೆಡ್ ಬಿಯರ್ಡ್’ ವಿಶ್ಲೇಷಣೆ

ಕಾಯಿಲೆ ಬರುವುದು ಎಲ್ಲಿಂದ? ಜಪಾನೀಸ್ ಸಿನೆಮಾ ‘ರೆಡ್ ಬಿಯರ್ಡ್’ ವಿಶ್ಲೇಷಣೆ

ಯಾವ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಮನುಷ್ಯನಿಗೆ ಮಾತ್ರ ಇಲ್ಲ. ಏಕೆಂದರೆ ಕಾಯಿಲೆ ಬರುವುದು ಸಮಾಜದಿಂದ. ಸಮಾಜದಲ್ಲಿರುವ ಬಡತನ ಮತ್ತು ಅಲ್ಲಿರುವ ಕೆಲವು ಮೂಲಸೌಕರ್ಯಗಳ ಸಮಸ್ಯೆಗಳಿಂದಾಗಿ ಮನುಷ್ಯ ರೋಗಿಯಾಗುತ್ತಾನೆ ಹೊರತು, ಮನುಷ್ಯ ಮೂಲತಃ ರೋಗಿ ಅಲ್ಲ.

ಜನ ಅರಣ್ಯ ಮತ್ತು ಸತ್ಯಜಿತ್ ರೇ ಚಿತ್ರ ಕಟ್ಟುವ ಕ್ರಮ: ಕಾಸರವಳ್ಳಿ ಮಾತು

ಜನ ಅರಣ್ಯ ಮತ್ತು ಸತ್ಯಜಿತ್ ರೇ ಚಿತ್ರ ಕಟ್ಟುವ ಕ್ರಮ: ಕಾಸರವಳ್ಳಿ ಮಾತು

ಸಾಮಾನ್ಯವಾಗಿ ನಮ್ಮಲ್ಲಿ ಸತ್ಯಜಿತ್ ರೇ ಅಂದ ತಕ್ಷಣ, ಪತೇರ್ ಪಾಂಚಾಲಿ, ಜಲ್ಸಾಗರ್, ಚಾರುಲತ, ದೇವಿ ಮತ್ತು ಮಹಾನಗರ್. ಇದರ ಬಗ್ಗೆ ಮಾತನಾಡುತ್ತಿರುತ್ತೀವಿ. ನಾನು ಸತ್ಯಜಿತ್ ರೇ ಅವರ ಚಿತ್ರಯಾನವನ್ನು ಮೂರ್ನಾಲ್ಕು ಘಟ್ಟಗಳಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾ ಹೋಗ್ತೀನಿ.

‘ಮುಖಾಮುಖಮ್’ ಜೊತೆ ಕಾಸರವಳ್ಳಿ ಮುಖಾಮುಖಿ

‘ಮುಖಾಮುಖಮ್’ ಜೊತೆ ಕಾಸರವಳ್ಳಿ ಮುಖಾಮುಖಿ

ಭಾರತದಲ್ಲಿ ಸಾಮಾನ್ಯವಾಗಿ, ಒಂದು ಕತೆಯನ್ನಿಟ್ಟುಕೊಂಡು ಕತೆಯನ್ನು ಹೇಳುವುದು ನಮ್ಮೆಲ್ಲರ ಉದ್ದೇಶವಾಗಿರುತ್ತದೆ. ಅದು ಸತ್ಯಜಿತ್ ರೇ ಅವರಿಂದ ಹಿಡಿದು, ಇವತ್ತಿನ ಎಲ್ಲಾ ಮುಖ್ಯ ನಿರ್ದೇಶಕರು ಅದನ್ನೇ ಮಾಡುತ್ತಾ ಹೋಗುತ್ತಿದ್ದಾರೆ. ಆದರೆ ಒಂದು ವಿಚಾರವನ್ನು ಇಟ್ಟುಕೊಂಡು, ಅದನ್ನು ಚಿತ್ರ ರೂಪದಲ್ಲಿ ಹೇಳುವುದಿದೆಯಲ್ಲಾ, ಅದು ಸ್ವಲ್ಪ ಕಷ್ಟ. ಅಡೂರ್ ಗೋಪಾಲಕೃಷ್ಣನ್ ಅವರು, ಪದೇ ಪದೇ ಅನೇಕ ಸಿನಿಮಾಗಳಲ್ಲಿ ಈ ರೀತಿಯ ಒಂದು ಕಥಾ ಸಂವಿಧಾನವನ್ನಾ ಇಟ್ಟುಕೊಳ್ಳುತ್ತಾರೆ. ಮುಖಾಮುಖಮ್ ಕೂಡ ಇದೇ ರೀತಿಯ ಚಿತ್ರ.

ವಾಸ್ತವ, ಭ್ರಮೆ, ನಂಬಿಕೆ: ‘ಸಂಸ್ಕಾರ’ದ ಬಗ್ಗೆ ಕಾಸರವಳ್ಳಿ ಮಾತು

ವಾಸ್ತವ, ಭ್ರಮೆ, ನಂಬಿಕೆ: ‘ಸಂಸ್ಕಾರ’ದ ಬಗ್ಗೆ ಕಾಸರವಳ್ಳಿ ಮಾತು

ಒಂದು ಸಂದರ್ಶನದಲ್ಲಿ ಅಡೂರು ಗೋಪಾಲಕೃಷ್ಣ, “ಸಾಕ್ಷ್ಯಚಿತ್ರ ಮಾಡುತ್ತಿದ್ದ ನನ್ನನ್ನು, ಕಥಾಚಿತ್ರದಲ್ಲಿಗೆ ಪ್ರೇರೆಪಿಸಿದ್ದು ಸಂಸ್ಕಾರ” ಎಂದು ಹೇಳಿದರು. ಹೀಗೆ ಇಷ್ಟೆಲ್ಲಾ ಜನರಿಗೆ ಪ್ರೇರಣೆ ಕೊಟ್ಟ ಸಂಸ್ಕಾರ, ರಾಷ್ಟ್ರಪತಿಗಳಿಂದ ಸ್ವರ್ಣ ಪದಕ ಪಡೆದ ಮೊದಲ ಕನ್ನಡ ಸಿನಿಮಾವಾಗಿ ಹೆಗ್ಗಳಿಕೆ ಪಡೆಯಿತು.