ಸೌಂದರ್ಯ ಮೀಮಾಂಸೆ ಕೆಲಸ ಮಾಡುವ ಬಗೆ

ಒಂದು ಸಿನೆಮಾ ಚೆನ್ನಾಗಿದೆ ಎನ್ನಬೇಕಾದರೆ, ಅದರ ತಾಂತ್ರಿಕ ಪರಿಷ್ಕಾರವನ್ನೂ ನಾವು, ನೀವು ಗಮನಿಸುತ್ತೇವೆ. ಇದರಲ್ಲಿ ಸೌಂದರ್ಯವನ್ನು ಕಾಣುತ್ತೇವೆ ತಾನೇ? ಈ ವಿವರಗಳಿಗೆ ಗಮನ ಹಾಗೂ ತಾಂತ್ರಿಕ ಪರಿಷ್ಕಾರದ ಕಡೆಗಿನ ಗಮನವೂ ಏಸ್ಥೆಟಿಕ್ ಅನುಭವದ ಒಂದು ಭಾಗವಾಗಿರುತ್ತದೆ. ಕಲೆಯನ್ನು, ಅದರಲ್ಲಿನ ಸೌಂದರ್ಯವನ್ನು ವಿರಾಮಕ್ಕಾಗಿ, ಮನರಂಜನೆಗಾಗಿಯೂ ಬಳಸಲಾಗುತ್ತದೆ. ಒಬ್ಬ ಗಣಿತ ಪ್ರಿಯನಿಗೆ ಗಣಿತ ಸಮಸ್ಯೆಯನ್ನು ಬಿಡಿಸುವಲ್ಲಿ ಸಿಗುವಂಥಾ ಒಳಗೊಳ್ಳಿವಿಕೆಯೂ ಒಂದು ಏಸ್ಥೆಟಿಕ್ ಅನುಭವವೇ. ಇದೇ ಅನುಭವ ಸಿನೆಮಾದಲ್ಲೂ ಸಾಧ್ಯವಾಗುತ್ತದೆ. ಇದು ಸಾಂಗತ್ಯದ ಸುಖವನ್ನು ಕಲ್ಪಿಸುತ್ತದೆ. ಇನ್ನು ಜೀವನದಲ್ಲಿ ಕಾಣುವ ಸಾಕಷ್ಟು ಅನುಭವಗಳ ಪುನರಾವರ್ತನೆಯಿಂದ, ಸಿಗುವ ಸುಖವೂ ಒಂದು ಏಸ್ಥೆಟಿಕಲ್ ಅನುಭವವೇ. ಈ ಅನುಭವವನ್ನು ನಮ್ಮ ಮುಖ್ಯವಾಹಿನಿಯ ಅಥವಾ ಕಮರ್ಷಿಯಲ್ ಸಿನೆಮಾಗಳಿಗೆ ಹೋಲಿಸಬಹುದು. ಇಲ್ಲಿ ಹೀರೋ ವಿಲನ್ ಮುಂದೆ ಬಂದಾಗಲೆಲ್ಲಾ, ಯಾರು ಒದೆ ತಿನ್ನುತ್ತಾರೆ ಎನ್ನುವ ಸಂಶಯವೇ ಪ್ರೇಕ್ಷಕರಿಗೆ ಇರುವುದಿಲ್ಲ. ಆದರೂ, ಇಡೀ ಪ್ರಕ್ರಿಯೆಯ ಪುನರಾವರ್ತನೆ ಒಂದು ಸುಖ ನೀಡುತ್ತದಲ್ಲಾ, ಇದೂ ಒಂದು ಏಸ್ಥೆಟಿಕ್ ಅನುಭವ. ಇನ್ನು ಸೌಂದರ್ಯ ಮೀಮಾಂಸೆ ಎನ್ನುವುದು ಕಲೆಯ ಗುಣವನ್ನು ನಿರ್ಧರಿಸಲು, ಅದರ ಕುರಿತಾಗಿ ಒಂದು ನಿಲುವು ತಳೆಯಲು ಅಗತ್ಯ ಪರಿಮಾಣವಾಗಿಯೂ ಕೆಲಸ ಮಾಡುತ್ತದೆ. ಹೀಗೆ ಸೌಂದರ್ಯ ಮೀಮಾಂಸೆ ಅನೇಕ ವಿಧಾನಗಳಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ, ಅಂತೆಯೇ ಸಿನೆಮಾದಲ್ಲೂ ಕೆಲಸ ಮಾಡುತ್ತದೆ.

ಅಭಯ ಸಿಂಹ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more