ಧ್ವನಿಯಲ್ಲೊಂದು ಪ್ರಪಂಚ

ವಾಲ್ಟರ್ ಮರ್ಕ್ (Walter Murch) ಎನ್ನುವ ಅಮೇರಿಕಾದ ಎಡಿಟರ್-ಸೌಂಡ್ ತಂತ್ರಜ್ಞರೊಡನೆ ಒಂದು ವಾರ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಗಾಡ್ ಫಾದರ್, ಅಪೊಕಲಿಪ್ಸ್  ನವ್, ದ ಇಂಗ್ಲೀಷ್ ಪೇಶೆಂಟ್ ಇತ್ಯಾದಿ ಸಿನೆಮಾಗಳಲ್ಲಿ ಕೆಲಸ ಮಾಡಿ ಎರಡು ಬಾರಿ ಆಸ್ಕರ್ ಗೆದ್ದಿರುವ ವ್ಯಕ್ತಿ ಇವರು. ಅವರು ನಮ್ಮ ಸಿನೆಮಾ ಶಾಲೆಗೆ ಪಾಠ ಮಾಡಲು ಬಂದಿದ್ದರು. ಅವರ ಜೊತೆಯಲ್ಲಿ ಅವರ ಪತ್ನಿ ಎಗ್ಗೀ ಮರ್ಕ್ (Aggie Murch) ಬಂದಿದ್ದರು. ಇಬ್ಬರೂ ಬಹಳ ಹಿರಿಯರು ಆದರೆ ತುಂಬಾ ಆಪ್ತವಾಗಿ ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದರು. ಒಂದು ಸಂಜೆ ನಾವೆಲ್ಲರೂ ಅವರ ಗೌರವಾರ್ಥ ಒಂದು ಸಣ್ಣ ಪಾರ್ಟಿ ಇಟ್ಟುಕೊಂಡಿದ್ದೆವು. ಆಗ ಹೀಗೇ ಮಾತಿನ ಮಧ್ಯದಲ್ಲಿ, ಎಗ್ಗಿಯವರನ್ನು ಅವರ ಆಸಕ್ತಿಗಳೇನು ಎಂದು ಕೇಳಿದೆವು. ಅವರು, ತಮ್ಮ ಪರ್ಸಿನಿಂದ ಒಂದು ಸಣ್ಣ ಸೌಂಡ್ ರೆಕಾರ್ಡರ್ ತೆಗೆದು ತೋರಿಸಿದರು. ಮರ್ಕ್ ದಂಪತಿಗಳಿಗೆ ವಿಶ್ವ ಸುತ್ತುವುದು ಇಷ್ಟದ ಕೆಲಸ. ಎಗ್ಗಿ ತಾವು ಹೋದಲ್ಲೆಲ್ಲಾ ಅಲ್ಲಿನ ವಿಶಿಷ್ಟ ಧ್ವನಿಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಪ್ರವಾಸಿಗರು, ಹೋದಲ್ಲೆಲ್ಲಾ ಫೋಟೋ ತೆಗೆಯುವಂತೆ, ಇವರು ಧ್ವನಿ ಮುದ್ರಣ ಮಾಡಿಕೊಳ್ಳುತ್ತಿದ್ದರು! ಅವರ ಜೀವಮಾನದಲ್ಲಿ ಒಂದು ದೊಡ್ಡ ಧ್ವನಿಯ ಲೈಬ್ರರಿಯನ್ನೇ ಅವರು ಕಟ್ಟಿಕೊಂಡಿದ್ದರು. ಫೋಟೋಗಳಿಗೆ ಇಲ್ಲದ ಒಂದು ಅಮೂರ್ತ ಗುಣ ಧ್ವನಿಗಳಿಗೆ ಇರುವುದರಿಂದ, ಆ ಸಂಗ್ರಹದ ಸುಖ, ಭಿನ್ನವೂ, ವಿಶಿಷ್ಟವೂ ಆಗಿರುತ್ತದೆ. ಸಿನೆಮಾ ಆಸಕ್ತರಾದ ನಾವು, ಧ್ವನಿಯ ಕಡೆಗೆ ಕಿವಿ-ಮನಸ್ಸನ್ನು ಹೆಚ್ಚು ಕೊಟ್ಟಷ್ಟೂ, ನಮ್ಮ ಪ್ರಪಂಚದ ಅರಿವು ಇನ್ನಷ್ಟು ಹಿಗ್ಗುವುದು ಸಾಧ್ಯ.

ಅಭಯ ಸಿಂಹ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more