ಸಿನೆಮಾ ಹಾಗೂ ರೂಪಕ

ಯಾವುದೇ ಕಲಾಪ್ರಕಾರಕ್ಕೂ ಒಂದು ರೂಪಕಾತ್ಮಕ ಶಕ್ತಿ ಇರಬೇಕು. ಸಿನೆಮಾ ಕೂಡಾ ಒಂದು ಕಲಾಪ್ರಕಾರ ಎಂದು ಗುರುತಿಸುವುದಕ್ಕೆ, ಅದರ ರೂಪಕಾತ್ಮಕ ಶಕ್ತಿಯೇ ಕಾರಣ. ಸಿನೆಮಾದಲ್ಲಿನ ದೃಶ್ಯ, ಶ್ರವ್ಯಗಳಲ್ಲಿ ಹೆಚ್ಚಿನವು, ನಾಟಕ, ಚಿತ್ರಕಲೆ, ಸಂಗೀತ, ಸಾಹಿತ್ಯ ಹೀಗೆ ಇತರ ಕಲಾಪ್ರಕಾರಗಳಿಂದ ಎರವಲು ಪಡೆದ ವಿಷಯಗಳಾಗಿವೆ. ಹೀಗೆಯೇ, ಸಿನೆಮಾದಲ್ಲಿನ ರೂಪಗಳನ್ನೂ ಸಾಕಷ್ಟು ಬಾರಿ ಉಳಿದ ಕಲಾಪ್ರಕಾರಗಳಿಂದಲೇ ತರಲಾಗುತ್ತದೆ. ಆದರೆ, ಸಿನೆಮಾಕ್ಕೆ ಅದರದ್ದೇ ಆದ ರೂಪಕಗಳು ಬೇಕಾಗುತ್ತವೆ. ಇಲ್ಲವಾದರೆ, ಆ ರೂಪಕ ವಾಚ್ಯವಾಗುವ ಸಾಧ್ಯತೆ ಇರುತ್ತದೆ; ನೈಜತೆಯ ಪರಿಧಿ ಮೀರಿ ಹೋಗುತ್ತದೆ. ಇದು ತಪ್ಪು-ಒಪ್ಪುಗಳ ಪ್ರಶ್ನೆಯಲ್ಲ. ನಮ್ಮಲ್ಲಿನ ಜನಪ್ರಿಯ ಸಿನೆಮಾಗಳಲ್ಲಿ ಅದು ಒಪ್ಪಿಗೆಯಾಗಿರುವ, ಯಶಸ್ವಿಯಾಗಿರುವ ಪ್ರಯೋಗವೇ ಆಗಿದೆ. ಉದಾಹರಣೆಗೆ, ಒಂದು ಸಿನೆಮಾದಲ್ಲಿ ನಾಯಕನ ಸಾಮರ್ಥ್ಯವನ್ನು ಬಣ್ಣಿಸಲು ಅವನ ನಡೆ – ಸಿಂಹ ನಡೆ ಎನ್ನುವ ರೂಪಕವನ್ನು, ನಾಯಕನ ನೆರಳನ್ನೇ ಸಿಂಹದ ನೆರಳಾಗಿ ತೋರಿಸಲಾಗಿದೆ. ಹೀಗೇ ಅದ್ಭುತ ಉದಾಹರಣೆಗಳು ಅನೇಕ ಸಿಗುತ್ತವೆ. ಪ್ರೇಕ್ಷಕರಿಗೆ ಇದು ನಿಜವಲ್ಲ ಎಂದು ತಿಳಿದಿದ್ದರೂ, ರೂಪಕವಾಗಿ ಅವರಿಗೆ ಭಾವವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಇನ್ನೊಂದು ರೀತಿಯ ಸಿನೆಮಾಗಳಲ್ಲಿ, ಅಂದರೆ, ನೈಜತೆಯ ಬಂಧದೊಳಗೆ ಇದ್ದೇ ರೂಪಕಗಳನ್ನು ರೂಪಿಸುವ ಚಿತ್ರಗಳಲ್ಲಿ, ಈ ವಿಷಯ ಇನ್ನಷ್ಟು ಸಂಕೀರ್ಣವಾಗುತ್ತದೆ. ಅಲ್ಲಿ, ಸಿನೆಮಾದೊಳಗೆ ಬಳಸುವ ಧ್ವನಿ, ಭಾಷೆ, ಚಿತ್ರಿಕೆಗಳು, ಅಭಿನಯ ಶೈಲಿ, ಬಣ್ಣಗಳು ಇತ್ಯಾದಿ ವಿವರಗಳನ್ನು ಬಳಸಿಕೊಂಡು ರೂಪಕಗಳನ್ನು ಕಟ್ಟಲಾಗುತ್ತದೆ. ಅಂಥಾ ಸಿನೆಮಾಗಳು, ಸಿನೆಮಾ ಪ್ರೇಕ್ಷಕನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಾಗಿ ಬೇಡುತ್ತವೆ. ಈ ರೂಪಕಗಳ ಶಕ್ತಿಯ ಬಗ್ಗೆ ಮುಂದೆ ಮತ್ತಷ್ಟು ದೀರ್ಘವಾಗಿ ಮಾತಾಡೋಣ.

ಅಭಯ ಸಿಂಹ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more