ಸಿನೆಮಾದಲ್ಲಿ ಸೌಂದರ್ಯ ಮೀಮಾಂಸೆಯ ಧಾತು

ಸಿನೆಮಾದ ಧಾತು ಶಕ್ತಿ ಏನು ಎಂದು ಯೋಚಿಸಿದರೆ, ನನಗೆ ಅದು ಸಿನೆಮಾಕ್ಕೆ ಇರುವ ಜಕ್ಸ್ ಟಪೋಸಿಂಗ್ (Juxtaposition) ಗುಣ ಎಂದೇ ಅನ್ನಿಸುತ್ತದೆ. ಒಂದರ ಒತ್ತಿಗೆ ಇನ್ನೊಂದನ್ನು ಇಟ್ಟು ಮೂರನೆಯ ಅರ್ಥವನ್ನು ಹುಟ್ಟಿಸುವ ಶಕ್ತಿ. ಇದು ಒಂದು ಚಿತ್ರಿಕೆಯಿಂದ ಇನ್ನೊಂದು ಚಿತ್ರಿಕೆಗೆ ಇರಬಹುದು ಅಥವಾ ಚಿತ್ರಿಕೆಯೊಳಗಿನ ಮಿಸ್-ಎನ್-ಸೇನ್ ಇರಬಹುದು. ಈ ಒಟ್ಟು ಕಟ್ಟೋಣದ ಮೂಲಕವೇ ಸಿನೆಮಾದಲ್ಲಿ ಒಂದು ಅನುಭವ ರೂಪುಗೊಳ್ಳುವುದು ಎನ್ನುವುದು ನನ್ನ ನಂಬಿಕೆ. ಒಂದು ಸಿನೆಮಾ ಎರಡು ಕಡೆಗಳಲ್ಲಿ ನಡೆಯುತ್ತಿರುತ್ತದೆ. ಒಂದು ಪರದೆಯ ಮೇಲೆ ಕಾಣಿಸುವ ಬಿಂಬಗಳಾದರೆ, ಇನ್ನೊಂದು ಪ್ರೇಕ್ಷಕನ ಮನಃಪಟಲದಲ್ಲಿ ನಡೆಯುತ್ತದೆ. ಇಲ್ಲಿ ಎರಡು ವಿಚಾರಗಳು ಮುಖ್ಯವಾಗುತ್ತದೆ. ನಿರ್ದೇಶಕ ಯಾವುದನ್ನು ತೋರಿಸುತ್ತಾನೆ ಹಾಗೂ ಹೇಗೆ ತೋರಿಸುತ್ತಾನೆ ಎನ್ನುವುದು. ಯಾವುದು ಎನ್ನುವುದನ್ನು ನಿರ್ದೇಶಕ ಆಯ್ಕೆ ಮಾಡಿಕೊಂಡ ಕಥಾವಸ್ತು. ಹೇಗೆ ಎನ್ನುವುದು ನಿರ್ದೇಶಕ ಆಯ್ಕೆ ಮಾಡಿಕೊಂಡ ನಿಲುವಿನ ದಾರಿಯಾಗಿರುತ್ತದೆ. ಈ ನಿಲುವಿನ ದಾರಿ ಅಥವಾ ಶೈಲಿಯಿಂದಾಗಿ, ಸಿನೆಮಾದ ತಾಂತ್ರಿಕ ವಿಚಾರಗಳೂ ಬದಲಾಗುತ್ತವೆ. ಸಿನೆಮಾದ ಏಸ್ಥೆಟಿಕ್ಸ್ ನಲ್ಲಿ ಅದರ ತಾಂತ್ರಿಕತೆಯ ಕೊಡುಗೆ ಬಹಳಷ್ಟಿರುವ ಕಾರಣ, ಈ ತಾಂತ್ರಿಕ ಬದಲಾವಣೆಯ ನಿರ್ಧಾರವೂ ಹಿರಿಯದ್ದಾಗಿರುತ್ತದೆ. ಉದಾಹರಣೆಗೆ, ಸಿನೆಮಾದಲ್ಲಿನ ಆಸ್ಪೆಕ್ಟ್ ರೇಷಿಯೋದಂಥಾ ಒಂದು ಸಣ್ಣ ವಿಷಯವನ್ನೇ ಗಮನಿಸೋಣ. ನೋಡುವಿಕೆಯ ಕೋನವನ್ನು ನಿರ್ಧರಿಸುವ ಅನೇಕ ಪ್ರಯೋಗಗಳ ಕಾರಣದಿಂದಾಗಿ, ಜಗತ್ತಿನಲ್ಲಿ, 4:3, 16:9, 1:1.88, 1:2.35… ಹೀಗೆ ಅನೇಕ ಪರಿಮಾಣಗಳಿವೆ. ಅನೇಕ ನಿರ್ದೇಶಕರು, ತಮ್ಮ ಸಿನೆಮಾದಲ್ಲಿನ ರಾಜಕೀಯ ನಿಲುವಿಗಾಗಿ ಈ ಆಸ್ಪೆಕ್ಟ್ ರೇಷಿಯೋದ ಆಯ್ಕೆ ಮಾಡುವುದೂ ಇದೆ. ಕನ್ನಡದ ಅಗ್ರ ಸಿನೆಮಾ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರೊಂದಿಗೆ ಈ ಕುರಿತು ಒಮ್ಮೆ ಮಾತನಾಡಿದಾಗ, ಅವರು ತಮ್ಮ ಕೆಲವು ಚಿತ್ರಗಳಿಗೆ 1:1.88 ಆಸ್ಪೆಕ್ಟ್ ರೇಷಿಯೋದ ಬಳಕೆಯ ಕುರಿತಾಗಿ, ಅದರ ಮೂಲಕ ತನ್ನ ನಿಲುವಿನ ಬಗ್ಗೆ ವಿವರಿಸಿದ್ದರು. ಇಂಥಾ ಕೆಲವು ತೀರಾ ತಾಂತ್ರಿಕ ನಿರ್ಧಾರಗಳು ಪ್ರೇಕ್ಷಕರ ಗಮನಕ್ಕೆ ಸುಲಭವಾಗಿ ಸಿಗದೇ ಹೋಗಬಹುದು. ಆದರೆ, ಆ ನಿರ್ಧಾರಗಳು, ಒಟ್ಟೂ ರಸಾಸ್ವಾದನೆಯ ದೃಷ್ಟಿಯಿಂದ ಮಹತ್ತರವಾದವು.

ಅಭಯ ಸಿಂಹ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more