
ಮೊಂಟಾಜ್ ಗಳನ್ನು ಸಾಮಾನ್ಯವಾಗಿ ಬಳಸುವ ಒಂದು ಕ್ರಮ ಭಾವದ ಪ್ರವಾಹವನ್ನು ಕಡಿಮೆ ಸಮಯದಲ್ಲಿ ತೋರಿಸುವುದಕ್ಕಿದ್ದರೆ, ಇನ್ನೊಂದು ಸಾಮಾನ್ಯ ಬಳಕೆ, ಒಂದು ಪರಿಸರವನ್ನು ಪರಿಚಯಿಸುವ ಸಂದರ್ಭದಲ್ಲಿ ಬಳಕೆಯಾಗುವಂಥಾದ್ದು. ಉದಾಹರಣೆಗೆ, ಒಂದು ಪಾತ್ರ ಎಂಥಾ ಪರಿಸರದಲ್ಲಿ ವಾಸವಾಗಿದೆ ಎಂದು ತೋರಿಸಲು ಒಂದಷ್ಟು ಶಾಟ್ಸ್ ಗಳನ್ನು ಜೊತೆಯಾಗಿ ಹಾಕುವುದರ ಮೂಲಕ ಪರಿಸರವನ್ನು ತೋರಿಸಬಹುದು. ಇಲ್ಲಿಯೂ ಶಾಟ್ಸ್ ಗಳ ಮಧ್ಯದಲ್ಲಿ ಒಂದು ಕಥನ ಬೇಕಾಗುತ್ತದೆ, ಭಾವನೆಯ ಚಲನೆ ಬೇಕಾಗುತ್ತದೆ. ಉದಾಹರಣೆಗೆ ಮೋಡ ಕವಿಯುವುದು, ಮಳೆ ಬರುವುದು, ಮಳೆ ನಿಂತು ಹನಿಗಳು ತೊಟ್ಟಿಕ್ಕುತ್ತಿರುವುದು ಅಥವಾ ಮಾರುಕಟ್ಟೆಯಲ್ಲಿ ಒಬ್ಬಾತ ನಡೆಯುವಾಗ ಹಿನ್ನೆಲೆಯ ಯಾವುದೋ ಧ್ವನಿಯ ಮೂಲಕ ಮುಮ್ಮುಖವಾಗಿ ಸಮಯದ ಸರಿಯುವಿಕೆಯ ಸೂಚನೆ ಇತ್ಯಾದಿ. ಹೀಗೆ ಮೊಂಟಾಜ್ ಎನ್ನುವ ಅದ್ಭುತವನ್ನು ಬಹಳ ಶಕ್ತಿಯುತವಾಗಿ ಬಳಸಬಹುದು. ಆದರೆ ಇದು ಹರಿತ ಚೂರಿಯಂತೆ ಎನ್ನುವ ಎಚ್ಚರದಲ್ಲೇ ಬಳಸಬೇಕು. ಇದನ್ನು ಸರಿಯಾಗಿ ನಿರ್ವಹಿಸಿದಾಗ, ಅದು ಅನುಭವವನ್ನು ಕಟ್ಟಿಕೊಡಬಹುದು ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ಪ್ರೇಕ್ಷಕರನ್ನು ನಿಮ್ಮ ಚಿತ್ರದಿಂದ ಹೊರಗೆ ನೂಕಬಹುದು. ಬನ್ನಿ ಬರೆಯೋಣ, ಪ್ರಯೋಗಿಸೋಣ, ಚಿತ್ರಿಸೋಣ.!
ಅಭಯ ಸಿಂಹ
0 Comments