ಕಾಮಾಲೆ ಕಣ್ಣು!

ಇಲ್ಲಿ ಒಂದೇ ಚಿತ್ರವನ್ನು ಎರಡು ವರ್ಣಗಳಲ್ಲಿ ತೋರಿಸಲಾಗಿದೆ ಗಮನಿಸಿ. ಇದು ಅಮೇರಿಕನ್ ಸಿನೆಮಾಗಳು ಹೇಗೆ ಮೆಕ್ಸಿಕೋವನ್ನು ನೋಡುತ್ತವೆ ಎನ್ನುವ ಹಾಸ್ಯಚಿತ್ರವಾಗಿದೆ. ಆದರೆ ಇದರಲ್ಲಿ ನಿಜವೂ ಅಡಗಿದೆ ತಾನೇ? ಇದು ಸಿನೆಮಾ ಮಾಡುವ ರಾಜಕೀಯ ಕೂಡಾ! ನಾವು ನೋಡುವ ಚಿತ್ರಗಳೊಳಗಿನ ವ್ಯಕ್ತಿಗಳ ಮುಖ, ಅಲ್ಲಿನ ಸ್ಥಳದ ವಿವರಗಳು, ಬೆಳಕಿನ ವಿವರಗಳು ಎಲ್ಲವೂ, ನೋಡುಗರ ಮನಸ್ಸಿನಲ್ಲಿ ಒಂದು ಪರಿಣಾಮವನ್ನು ಉಂಟು ಮಾಡುತ್ತದೆ. ಹೀಗಾಗಿ, ಈ ಚಿತ್ರವನ್ನು ಗಮನಿಸಿದಾಗ, ಇಲ್ಲಿರುವ ಒಂದು ಬಣ್ಣಕ್ಕೆ ಸಂಬಂಧಿಸಿದ ಅಥವಾ ಟೋನಾಲಿಟಿಗೆ ಸಂಬಂಧಿಸಿದ ನಿಲುಮೆ ಕಾಣಿಸುತ್ತದೆ. ಯಾವ ಚಿತ್ರವನ್ನು ಯಾವ ಬೆಳಕಿನಲ್ಲಿ ಚಿತ್ರೀಕರಿಸಲಾಗಿದೆ, ಯಾವ ಸ್ಥಳಗಳಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ ಇತ್ಯಾದಿಗಳು, ನಿರ್ದೇಶಕನ ಒಟ್ಟೂ ರಾಜಕೀಯ, ಸಾಮಾಜಿಕ ನಿಲುವುಗಳ ಅಥವಾ ಅವನ ಸೌಂದರ್ಯ ಮೀಮಾಂಸೆಯ ಅಭಿವ್ಯಕ್ತಿಯೇ ಆಗಿರುತ್ತದೆ. ಹೀಗಾಗಿ, ಸಿನೆಮಾದಲ್ಲಿನ ಸೌಂದರ್ಯ ಮೀಮಾಂಸೆಯೂ ರೊಮ್ಯಾಂಟಿಕ್, ಕ್ಯೂಬಿಸ್ಟ್, ಸರಿಯಲಿಸ್ಟಿಕ್, ನವ್ಯ, ನವ್ಯೋತ್ತರ ಹೀಗೆ ಸಾಹಿತ್ಯ, ಚಿತ್ರಕಲೆ, ಸಂಗೀತ ಇತ್ಯಾದಿಗಳಲ್ಲಿ ಕಂಡ ಅನೇಕ ಏಸ್ಥೆಟಿಕ್ಸ್ ಫ್ರೇಮ್ ವರ್ಕ್ ಸಿನೆಮಾದಲ್ಲೂ ಕಾಣಿಸುತ್ತದೆ. ಅದರ ಅಭಿವ್ಯಕ್ತಿ ಮಾತ್ರ ಮಾಧ್ಯಮದ ಮಿತಿಯೊಳಗೆ ವಿಭಿನ್ನವಾಗಿರುತ್ತದೆ.

ಅಭಯ ಸಿಂಹ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more