ಚಲನಚಿತ್ರದಲ್ಲಿ ಧ್ವನಿ । ಭಾಗ 1

ಸಿನೆಮಾ ಒಂದು ದೃಶ್ಯ ಮಾಧ್ಯಮ ಎಂದು ಹೇಳಿದಾಗಲೆಲ್ಲಾ ನನಗೆ ಕಸಿವಿಸಿಯಾಗುತ್ತದೆ. ಸಿನೆಮಾ ಒಂದು ದೃಶ್ಯ ಹಾಗೂ ಶ್ರವ್ಯ ಮಾಧ್ಯಮ (Audio-visual media). ಧ್ವನಿ ಸಂಯೋಜನೆ (sound design) ಎನ್ನುವುದನ್ನು ವಿಶೇಷವಾಗಿ ಕಲಿಸುವಂಥಾ ಒಂದು ವಿಜ್ಞಾನವೇ ಇದೆ. ಇತ್ತೀಚಿನ ದಿನಗಳಲ್ಲಿ ಕೆಲವು ಭಾರತೀಯ ಸಿನೆಮಾಗಳು ಇದನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರೂ, ಬಹುತೇಕ ಇದೊಂದು ಉಪೇಕ್ಷಿತ ಕಲೆಯಾಗಿದೆ. ಒಂದು ಚಿತ್ರವನ್ನು ನೊಡುವಾಗ, ಪಾತ್ರಗಳು ನಡೆದಾಡಿದಾಗ ಹೆಜ್ಜೆಯ ಸಪ್ಪಳ, ಗಾಜು ಒಡೆದಾಗ ಅದರ ಶಬ್ದ ಇತ್ಯಾದಿಗಳನ್ನು ಧ್ವನಿ ಸಂಯೋಜನೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇವುಗಳು ಧ್ವನಿ ಸಂಯೋಜನೆಯ ಪ್ರಾಥಮಿಕ ಹಂತ ಮಾತ್ರ. ನಮ್ಮೆಲ್ಲಾ ಅನುಭವಗಳು ಪಂಚೇಂದ್ರಿಯಗಳಿಂದ ನಮಗೆ ದಕ್ಕುತ್ತದೆ. ಸಿನೆಮಾವೊಂದಕ್ಕೆ ಕಣ್ಣು ಹಾಗೂ ಕಿವಿ ಈ ಎರಡು ಇಂದ್ರಿಯಗಳ ಮೂಲಕ ನಮ್ಮನ್ನು ತಟ್ಟಲು ಸಾಧ್ಯವಿದೆ. (ಸದ್ಯಕ್ಕೆ) ಇವೆರಡೂ ನಮ್ಮಲ್ಲಿ ಉಂಟುಮಾಡುವ ತಾತ್ಕಾಲಿಕ ಅನುಭವಗಳ ಸರಣಿಯೇ ಒಂದು ಸಿನೆಮಾ ಆಗಿರುತ್ತದೆ. ಕೆಲವು ಚಿತ್ರಗಳು ಕೇವಲ ಕಣ್ಣುಗಳ ಮೂಲಕ ನಮ್ಮನ್ನು ತಟ್ಟಿದರೆ, ಇನ್ನು ಕೆಲವು ಕೇವಲ ಧ್ವನಿಯ ಮೂಲಕ. ಆದರೆ ಇವೆರಡನ್ನೂ ಚೆನ್ನಾದ ಹದದಲ್ಲಿ ಬಳಸಿದಾಗ ಮಾತ್ರ, ಚಲನ ಚಿತ್ರ ಅದರ ಸಂಪೂರ್ಣ ಅನುಭವವನ್ನು ಕೊಡಲು ಸಾಧ್ಯ. ಇವೆರಡರ ಸರಿಯಾದ ಪ್ರಯೋಗದಿಂದ ಉತ್ಪನ್ನವಾಗುವ ಭಾವನೆಗಳು, ಅದರ ತೀವ್ರತೆ ಭಿನ್ನವಾದದ್ದರಿಂದ ನಿರ್ದೇಶಕ ತಾನು ಹೇಳಬಯಸುವ ಭಾವನೆಯನ್ನು ಸಮರ್ಥವಾಗಿ ಹೇಳುವ ಮಾಧ್ಯಮವನ್ನು ಆಯಾ ಸಂದರ್ಭದಲ್ಲಿ ಪ್ರಮಾಣಾನುಸಾರ ಬಳಸಿಕೊಳ್ಳುತ್ತಾನೆ.

ಅಭಯ ಸಿಂಹ

0 Comments

Submit a Comment

Your email address will not be published. Required fields are marked *

Related Articles

Related

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಬದುಕಿನ ಏಕತಾನತೆಯನ್ನು ಭೇದಿಸುವ ಕಥಾಹಂದರ: ಭುವನ್ ಶೋಮ್

ಸಿನಿಮಾದ ನಿರೂಪಣೆಯನ್ನು ವಾಯ್ಸ್ ಓವರ್ ಮೂಲಕ ಹೇಳಲಾಗಿದೆ. ಇದಕ್ಕೂ ಮುನ್ನ ಈ ಶೈಲಿ ಫ್ರೆಂಚ್ ನ್ಯೂ ವೇವ್ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿತ್ತು. ಇಲ್ಲಿ ಅಶರೀರವಾಣಿ (ವಾಯ್ಸ್ ಓವರ್) ತಂತ್ರಗಾರಿಕೆಯನ್ನು ಅದ್ಭುತವಾಗಿ ಬಳಸಲಾಗಿದೆ. ಆಶ್ಚರ್ಯ ಸಂಗತಿ ಎಂದರೆ, ಈ ವಾಯ್ಸ್ ಓವರ್ ಕೊಟ್ಟಿದ್ದು ಅಮಿತಾಬ್ ಬಚ್ಚನ್. ಆಗಿನ್ನೂ ಅವರು ಖ್ಯಾತರಾಗಿರಲಿಲ್ಲ. ಅನಿಮೇಷನ್ ಮೂಲಕ ಭುವನ್ ಶೋಮ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಳಲಾಗಿದೆ. ಸಾಕ್ಷ್ಯಚಿತ್ರದ ಮಾದರಿಯಲ್ಲಿ ಪಾತ್ರಗಳನ್ನು ಪರಿಚಯಿಸಲಾಗಿದೆ.

read more
Blogging the Reel World – NO MAN’S LAND [2001]

Blogging the Reel World – NO MAN’S LAND [2001]

“No Man’s Land” is a powerful and thought-provoking film that explores the devastating effects of war on individuals and society. The film’s setting, the Bosnian War, serves as a backdrop for a deeper examination of the nature of conflict and the ways in which it can be perpetuated by political and ideological differences.

read more