ವಾಸ್ತವ, ಭ್ರಮೆ, ನಂಬಿಕೆ: ‘ಸಂಸ್ಕಾರ’ದ ಬಗ್ಗೆ ಕಾಸರವಳ್ಳಿ ಮಾತು

ವಾಸ್ತವ, ಭ್ರಮೆ, ನಂಬಿಕೆ: ‘ಸಂಸ್ಕಾರ’ದ ಬಗ್ಗೆ ಕಾಸರವಳ್ಳಿ ಮಾತು

1970ರಲ್ಲಿ ಬಿಡುಗಡೆಯಾದ ‘ಸಂಸ್ಕಾರ’, ಕನ್ನಡ ಸಿನಿಮಾ ಜಗತ್ತಿನಲ್ಲಿ ನನ್ನನ್ನು ತುಂಬಾ ಪ್ರಭಾವಿಸಿದ ಸಿನಿಮಾ. ಕನ್ನಡ ಚಿತ್ರಗಳು ಅಲ್ಲಿಯ ತನಕ ಕೇವಲ ಭಾವನಾತ್ಮಕ ನೆಲೆಯಲ್ಲಿರುತ್ತಿದ್ದವು. ಪ್ರೇಕ್ಷಕನನ್ನು ಅಳಿಸುವ, ನಗಿಸುವ ಮತ್ತು ರಂಜಿಸುವ ರೀತಿಯಲ್ಲಿನ ಕಥೆಗಳು ಹೆಚ್ಚಾಗಿದ್ದವು. ಅವುಗಳೆಲ್ಲಾ ಯಶಸ್ವಿ ಸಿನಿಮಾವಾದರೂ...