ಒಂದು ಸಿನಿಮಾ ಎಂದಾಕ್ಷಣ ನಮಗೆ ಅದರಲ್ಲಿ ಅಭಿನಯಿಸಿದ/ಅಭಿನಯಿಸುತ್ತಿರುವ ನಟ, ನಟಿ, ನಿರ್ದೇಶಕರ ರೂಪ ಕಣ್ಮುಂದೆ ಬರುತ್ತದೆ. ಆದರೆ 80,90ರ ದಶಕದ ಸಿನಿಮಾಗಳು ಪ್ರಸಾರವಾದ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಸಾಮಾನ್ಯ ಹೆಸರು ಪ್ರತಿಯೊಬ್ಬರ ಗಮನ ಸೆಳೆಯುತ್ತದೆ. ಅದು ಉಡುಪಿ ಜಯರಾಂ ಎಂಬ ನೃತ್ಯ ಬ್ರಹ್ಮನ...